Question

ಮಾನವನ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಈ ಭೂಮಿಗೆ ಇದೆ. ಆದರೆ ಅವನ ದುರಾಸೆಗಳನ್ನು ಅಲ್ಲ ಎಂದು ಹೇಳಿದ ಪಾಶ್ಚಾತ್ಯ ವಿಜ್ಞಾನಿ ಅಥವಾ ತತಜ್ಞಾನಿ ಯಾರು ?

A

ಐಜಾಕ ನ್ಯೂಟನ್

B

ಫ್ರಾನ್ಸಿಸ್‌ ಬೆಕನ್‌

C

ಕೋಪರ್ನಿಕಸ್

D

ಯುಕ್ಲಿಡ

Text Solution
Verified by Experts

ಸರಿಉತ್ತರ 2) ಫ್ರಾನ್ಸಿಸ್‌ ಬೆಕನ್

ಐಜಾಕ ನ್ಯೂಟನ್-ಇವರು ಓರ್ವ ಆಂಗ್ಲ ಭೌತವಿಜ್ಞಾನಿ, ಗಣಿತಜ್ಞ , ಖಗೋಳಶಾಸ್ತ್ರಜ್ಞ, ಸ್ವಾಭಾವಿಕ ತತ್ವಜ್ಞಾನಿ, ರಸಸಿದ್ಧಾಂತಿ, ಹಾಗೂ ಬ್ರಹ್ಮಜ್ಞಾನಿಯಾಗಿದ್ದರು. 1687ರಲ್ಲಿ ಪ್ರಕಟಿಸಿದ ಅವರ ಫಿಲಾಸೊಫೀಸ್‌ ನ್ಯಾಚ್ಯುರಲಿಸ್ ಪ್ರಿನ್ಸಿಪಿಯಾ ಮ್ಯಾಥೆಮೆಟಿಕಾ (ಸಾಮಾನ್ಯವಾಗಿ ಪ್ರಿನ್ಸಿಪಿಯಾ ಎಂದು ಕರೆಯಲ್ಪಡುವ) ಪುಸ್ತಕವು ವಿಜ್ಞಾನದ ಇತಿಹಾಸದಲ್ಲೇ ಬಹು ಪ್ರಭಾವೀ ಪುಸ್ತಕಗಳಲ್ಲಿ ಒಂದಾಗಿದ್ದು, ನ್ಯೂಟನ್‌ರು ವಿವರಿಸಿದ ಸಾರ್ವತ್ರಿಕ ಗುರುತ್ವಾಕರ್ಷಣೆ( Gravitational power)  ಹಾಗೂ ಮೂರು ಗತಿಸೂತ್ರಗಳು(Newton’s law of motion) ಮುಂದಿನ ಮೂರು ಶತಮಾನಗಳ ಕಾಲ ಭೌತಿಕ ಬ್ರಹ್ಮಾಂಡದ ವೈಜ್ಞಾನಿಕ ನೋಟವನ್ನೇ ಆಳಿದವು. ನ್ಯೂಟನ್‌ರು ಭೂಮಿಯ ಮೇಲಿನ ವಸ್ತುಗಳ ಚಲನೆ ಹಾಗೂ ಬಾಹ್ಯಾಕಾಶ ವಸ್ತುಗಳ ಚಲನೆಯೂ ಒಂದೇ ಗುಂಪಿನ ನೈಸರ್ಗಿಕ ಸೂತ್ರಗಳನ್ನು ಪಾಲಿಸುತ್ತವೆ ಎಂದು ಕೆಪ್ಲರನ ಗ್ರಹಗಳ ಚಲನೆಯ ಮೇಲಿನ ಸೂತ್ರಗಳು ಹಾಗೂ ತನ್ನ ಗುರುತ್ವಾಕರ್ಷಣಾ ಸಿದ್ಧಾಂತಗಳ ನಡುವಿನ ಸಾಮರಸ್ಯವನ್ನು ತೋರಿಸಿದರು. ಆ ಮೂಲಕ ಸೂರ್ಯಕೇಂದ್ರಿತವ್ಯವಸ್ಥೆಯ ಉಳಿದ ಅನುಮಾನಗಳನ್ನು ಪರಿಹರಿಸಿ ವೈಜ್ಞಾನಿಕ ಕ್ರಾಂತಿಯನ್ನು ಮುನ್ನಡೆಸಿದರು. 

ಫ್ರಾನ್ಸಿಸ್‌ ಬೆಕನ್‌ - ಅವನನ್ನು ಅನುಭವಜನ್ಯ ವಿಧಾನ (empiricism)ದ ಜನಕ ಎಂದು ಗುರುತಿಸಲಾಗುತ್ತದೆ. ಅವನ ಪ್ರಮುಖ ಕೃತಿಗಳಲ್ಲೊಂದು ನೋವಮ್ ಆರ್ಗನಮ್ .

ಕೋಪರ್ನಿಕಸ್ – ಇವನು ಒಬ್ಬ ಖ್ಯಾತ ಖಗೋಳಶಾಸ್ತ್ರಜ್ಞ. ಪೋಲೆಂಡಿನ ಇವರನ್ನು ಆಧುನಿಕ ಖಗೋಳಶಾಸ್ತ್ರದ ಪಿತಾಮಹ ಎನ್ನುವರು.

ಇವರು ಪ್ರಥಮವಾಗಿ ಭೂಮಿಯು ಒಂದು ಚಲಿಸುತ್ತಿರುವ ಗ್ರಹ ಎಂದು ಪ್ರತಿಪಾದಿಸಿದನು.

ಯುಕ್ಲಿಡ - ಯೂಕ್ಲಿಡ್ ಒಬ್ಬ ಮಹಾನ್ ಗಣಿತಜ್ಞನಾಗಿದ್ದು ಅವರನ್ನು ಜ್ಯಾಮಿತಿಯ ಪಿತಾಮಹ ಎಂದು ಉಲ್ಲೇಖಿಸಲ್ಪಡಲಾಗುತ್ತದೆ.

'ರೇಖಾಗಣಿತದ ತಂದೆ' ಎಂದು ಹೆಸರುವಾಸಿಯಾದ ಇವರ ಗೌರವಾರ್ಥವಾಗಿ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ESA) ಗಗನನೌಕೆಯನ್ನು ಯೂಕ್ಲಿಡ್  ಎಂದು ಹೆಸರಿಸಲಾಯಿತು.

Updated on:21/07/2023